ಭಾರತದ ತುತ್ತತುದಿಗಳು ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ಭಾರತದಲ್ಲಿನ ಇತರ ಯಾವುದೇ ಸ್ಥಳಗಿಂತ ಅಂತ್ಯದಲ್ಲಿರುವಂಥಹ ಸ್ಥಳಗಳಾಗಿವೆ. ಉತ್ತರ ಮತ್ತು ಪೂರ್ವದಲ್ಲಿ ಗುರುತಿಸಲ್ಪಟ್ಟಿರುವ ತುತ್ತತುದಿಗಳು ಚೀನಾ ಮತ್ತು ಭಾರತ ನಡುವಿನ ವಿವಾದಿತ ಪ್ರದೇಶದಲ್ಲಿವೆ. ಭಾರತ ಭೂಖಂಡದಲ್ಲಿ (ಅಂಡಮಾನ್ ದ್ವೀಪ ಸಮೂಹವನ್ನು ಹೊರತುಪಡಿಸಿ) ದಕ್ಷಿಣದ ತುತ್ತತುದಿಯಾದ ಕನ್ಯಾಕುಮಾರಿಯನ್ನು ಹೊರತುಪಡಿಸಿ, ಉಳಿದ ಯಾವುದೇ ತುತ್ತತುದಿಯ ಪ್ರದೇಶವು ವಾಸಯೋಗ್ಯವಿಲ್ಲ. ಅಕ್ಷಾಂಶ ಮತ್ತು ರೇಖಾಂಶಗಳನ್ನು ದಶಮಾಂಶ ಪದವಿ ಸಂಕೇತದ ಮೂಲಕ ವ್ಯಕ್ತಪಡಿಸಲಾಗುತ್ತದೆ. ಉತ್ತರ ಗೋಲಾರ್ಧದಲ್ಲಿನ ಅಕ್ಷಾಂಶಗಳನ್ನು ಧನಾತ್ಮಕ ಮೌಲ್ಯದಿಂದ, ಮತ್ತು ದಕ್ಷಿಣ ಗೋಲಾರ್ಧದಲ್ಲಿನ ಅಕ್ಷಾಂಶಗಳನ್ನು ಋಣಾತ್ಮಕ ಮೌಲ್ಯದಿಂದ ಸೂಚಿಸಲಾಗುತ್ತದೆ. ಹಾಗೆಯೇ, ಪೂರ್ವ ಮತ್ತು ಪಶ್ಚಿಮ ಗೋಲಾರ್ಧದಲ್ಲಿನ ರೇಖಾಂಶಗಳು ಕ್ರಮವಾಗಿ ಧನಾತ್ಮಕ ಮತ್ತು ಋಣಾತ್ಮಕ ಮೌಲ್ಯಗಳಿಂದ ಸೂಚಿಸಲ್ಪಡುತ್ತವೆ. ಗೂಗಲ್ ಅರ್ಥ್ WGS84 ಭೌಗೋಳಿಕ ಸ್ಥಾನೀಕರಣ ವ್ಯವಸ್ಥೆಯನ್ನು (ಜಿಪಿಎಸ್) ಬಳಸುತ್ತಿದ್ದು, ಈ ಲೇಖನದಲ್ಲಿ ಉಲ್ಲೇಖಿಸಿರುವ ಕಕ್ಷೆಗಳ ಮೂಲವಾಗಿದೆ. ಹೆಚ್ಚುವರಿಯಾಗಿ, ಎತ್ತರದಲ್ಲಿನ ಋಣಾತ್ಮಕ ಮೌಲ್ಯವು ಸಮುದ್ರ ಮಟ್ಟದಿಂದ ಕೆಳಗಿನ ಸ್ಥರವನ್ನು ಸೂಚಿಸುತ್ತದೆ. == ತುತ್ತತುದಿಗಳು == == ಎತ್ತರಗಳು == == ಇವುಗಳನ್ನೂ ನೋಡಿ == ಭಾರತದ ಭೂಗೋಳ ಏಷ್ಯಾದ ತುತ್ತತುದಿಗಳು ಕಾಶ್ಮೀರ ವಿವಾದ == ಟಿಪ್ಪಣಿಗಳು == == ಉಲ್ಲೇಖಗಳು ==